ಜನನ ೧೯೫೫. ಕನ್ನಡ ಎಂ. ಎ. ಪದವೀಧರರು, ಅತ್ಯುನ್ನತ ಶ್ರೇಣಿಯೊಡನೆ ಚಿನ್ನದ ಪದಕಗಳನ್ನು ಗಳಿಸಿದವರು. ಓದಿದ್ದು ಮೈಸೂರು ವಿವಿಯಲ್ಲಿ. ೧೯೭೫ರಿಂದ ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಸೇವೆ. ಪ್ರಸ್ತುತ ಪ್ರಾಂಶುಪಾಲರ ಹುದ್ದೆಯಲ್ಲಿದ್ದಾರೆ. ಕನ್ನಡ ವ್ಯಾಕರಣ, ವನ್ಯಜೀವನ, ಲಲಿತ ಪ್ರಬಂಧ, ವಿಮರ್ಶೆ ಮೊದಲಾದ ಅನೇಕ ಕ್ಷೇತ್ರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ.